• Geocaching is a high-tech treasure hunting game played throughout the world by adventure seekers equipped with GPS devices. The basic idea is to locate hidden containers, called geocaches, outdoors and then share your experiences online. Geocaching is enjoyed by people from all age groups, with a strong sense of community and support for the environment.
  • ಖಾಸಗಿ ಸುದ್ದಿ ಚಾನೆಲ್ ನಿರೂಪಕರೊಬ್ಬರು ಭಾರತಿ ಅವರಿಗೆ ಕೇಳಿದ ಪ್ರಶ್ನೆ "ಮೇಡಂ..ವಿಷ್ಣುವರ್ಧನ್ ಅವರ ಸಾವಿನ ಹಿನ್ನೆಲೆ ಏನು?" ಅವರು ಸಾತ್ವಿಕ ಸಿಟ್ಟು ತೋರಿದಂತೆ ಮೈಕ್ ಗಳನ್ನು ತಳ್ಳಿ, ಉಬ್ಬಿದ ಗಂಟಲು, ತುಂಬಿ ಬಂದ ಕಣ್ಣಾಲೆಗಳನ್ನು ಮುಚ್ಚಿ ಒಳನಡೆದ ದೃಶ್ಯ ನೋಡುಗರ ಮನ ನೋಯಿಸಿತು. ಭಗವಂತ ನಮ್ಮ ಸರಕಾರಿ ಅಧಿಕಾರಿಗಳಂತೆ (ಕ್ಷಮಿಸಿ ಇಲ್ಲಿ ‘ಅಭಿಮಾನಿಗಳಂತೆ’) ಯಾವುದಕ್ಕೂ ಹೊಣೆಗಾರನಲ್ಲ. ಅದಕ್ಕೊಂದು ಕಾರಣವನ್ನು ಸಹ ತಾನೇ ಪೋಣಿಸಿ, ಅದನ್ನೇ ಉತ್ತರ ವೆಂಬಂತೆ ಕೊರಳಿಗೆ ಹಾಕಿ ಅಲ್ಲಿಗೆ ಕರೆದೊಯ್ಯುತ್ತಾನೆ. ಇದು ವ್ಯವಹಾರ ಜ್ಞಾನ. ಭಾರತಿ ಆ ಹಂತದಲ್ಲಿ ಯಾವ ಉತ್ತರವನ್ನು ತಾನೇ ಕೊಡಬಲ್ಲರು? ಇದನ್ನು ನಾವು ಅರಗಿಸಿಕೊಳ್ಳುವ ಮೊದಲೇ ‘ಮೇಡಂ..ನಿಮಗೇನನ್ನಿಸುತ್ತಿದೆ ಈ ಕ್ಷಣದಲ್ಲಿ?" ಹತ್ತೇ ನಿಮಿಷದಲ್ಲಿ ಮತ್ತೊಂದು ಸುದ್ದಿಯ live ಚಾನೆಲ್ ವರದಿಗಾರ ಪ್ರಶ್ನಿಸಿದ! ಸಾವಿನ ಮನೆಯಲ್ಲೂ ಸುದ್ದಿ ಹಸಿವೆ? ಸೂತಕದ ಮನೆಯಲ್ಲಿ ಚಕ್ಕಳಬಕ್ಕಳ ಹಾಕಿಕೊಂಡು ಕುಳಿತು ಊಟ ಉಣಬಡಿಸಿ ಎಂದು ಕೇಳಿದಂತೆ.