ವ್ಯಂಗ ಚಿತ್ರಕಾರರು ಸಾಮಾನ್ಯವಾಗಿ ಸಮಾಜದ ಒರೆ ಕೊರೆಗಳನ್ನು ಹಾಸ್ಯವಾಗಿಸಿ ಸಾಮನ್ಯನನ್ನು ಚಿಂತನೆಗೆ ಹಚ್ಛುವ ಕೆಲಸವನ್ನು ಮಾಡುತ್ತಾರೆ. ಕಹಿ ಸತ್ಯಗಳನ್ನು ಪ್ರಿಯವಾಗಿ, ನೇರಾವಾಗಿ ತಲುಪಿಸುವ ಕೆಲಸವನ್ನು ಮಾಡುವುದರಿಂದಲೆ ನಮಗೆ ಅವರ ಮೇಲೆ ಅಭಿಮಾನ, ಪ್ರೀತಿ. ಪ್ರಕಾಶ್ ಅವರ ಇವತ್ತಿನ ಈ ಚಿತ್ರ ಇದ್ಯಾವದನ್ನು ಮಾಡುವುದಿಲ್ಲ. ಹೆಂಗಳೆಯರ ಆಯ್ಕೆ ಸಾತಂತ್ರ್ಯವನ್ನು ಅಲ್ಲಗೆಳೆಯುವ ಕೆಲಸವನ್ನಷ್ಟೆ ಇದು ಮಾಡುತ್ತದೆ. ಕೆಲವು ದಿನಗಳ ಹಿಂದೆ ಆಂಗ್ಲ ದೈನಿಕವೊಂದು ದೀಪಿಕಾಳ ಎದೆಯ ವಿಡಿಯೊ ಹಾಕಿ, ಅದೇನು ಮಹ, ಚಲನಚಿತ್ರಗಳಲ್ಲಿ ತೋರಿಸಿದ್ದನೆ ಇಲ್ಲಿ ತೊರಿಸಿದ್ದೇವೆ ಅಂತ ಸಮಜಾಯಿಸಿ ಕೊಟ್ಟಿತ್ತು. ಆಗಲು ಅದು ಆಕೆಯ ಅಯ್ಕೆಯ ಬಗ್ಗೆ ಯೊಚಿಸದಂತಿರಲಿಲ್ಲ. ಇಗಲೂ ನೀವು ಯೊಚಿಸದಂತಿಲ್ಲ.

Instagram filter used: Normal