I made poori yesterday
ನಿನ್ನೆ ನಾನು ಪೂರಿ ಮಾಡಿದೆ
I am making poori today
ಇವತ್ತು ನಾನು ಪೂರಿ ಮಾಡ್ತಾ ಇದ್ದೀನಿ
I will make poori tomorrow
ನಾಳೆ ನಾನು ಪೂರಿ ಮಾಡ್ತೀನಿ

Verb: make
ಕ್ರಿಯಾಪದ: ಮಾಡು

I ate dose yesterday
ನಿನ್ನೆ ನಾನು ದೋಸೆ ತಿಂದೆ
I am eating dose today
ಇವತ್ತು ನಾನು ದೋಸೆ ತಿಂತಾ ಇದ್ದೀನಿ
I will eat dose tomorrow
ನಾಳೆ ನಾನು ದೋಸೆ ತಿಂತೀನಿ

Verb: eat (ಕ್ರಿಯಾಪದ ತಿನ್ನು)

How many brothers and sisters do you have?
ನಿಮಗೆ ಎಷ್ಟು ಜನ ಅಣ್ಣ ತಂಗಿಯರು?

I have one elder sister and one younger brother
ನನಗೆ ಒಬ್ಬ ಅಕ್ಕ ಹಾಗು ಒಬ್ಬ ತಮ್ಮ ಇದ್ದಾನೆ.

How many bowlers do you have in your team?
ನಿಮ್ಮ ತಂಡದಲ್ಲಿ ಎಷ್ಟು ಜನ ಬೌಲರ್ ಇದ್ದಾರೆ?

We have 2 bowlers and 3 all rounders
ನಮ್ಮಲ್ಲಿ ಇಬ್ಬರು ಬೌಲರ್‌ಗಳು ಮತ್ತು ಮೂರು ಜನ ಆಲ್‌ರೌಂಡರ್ ಗಳು ಇದ್ದಾರೆ.

Give me half kg rice and 3/4 kg potato
ನನಗೆ ಅರ್ಧ ಕೆಜಿ ಅಕ್ಕಿ ಮತ್ತು ಮುಕ್ಕಾಲು ಕೆಜಿ ಆಲೂಗಡ್ಡೆ ಕೊಡಿ

OK. Do you need drum sticks.
ಸರಿ. ನಿಮಗೆ ನುಗ್ಗೆಕಾಯಿ ಬೇಕ?

Yes, Half a dozen
ಬೇಕು. ಅರ್ಧ ದಜ಼ನ್ ಕೊಡಿ

Please pack 3 saress and 5 blouse for the wedding
ಮೂರು ಸೀರೆ ಐದು ರವಿಕೆಗಳನ್ನು ಕಟ್ಟಿಡಿ.

I will. How many earrings do you need?
ಕಟ್ಟಿಡುವೆ. ನಿಮಗೆಷ್ಟು ಒಲೆಗಳು ಬೇಕು?

Two should be enough
ಎರಡು ಸಾಕು.

Please pack four plates of idlis and two vada
ನಾಲ್ಕು ಪ್ಲೇಟ್ ಇಡ್ಲಿ ಮತ್ತು ಎರಡು ವಡೆ ಪಾರ್ಸೆಲ್ ಮಾಡಿ

Sure. The bill for the same is 90 rupees
ಆಯಿತು ಸ್ವಾಮಿ. ತೊಂಬತ್ತು ರುಪಾಯಿ ಆಗುತ್ತೆ.