How much home loan are you taking?
ನೀವು ಮನೆಯ ಮೇಲೆ ಎಷ್ಟು ಸಾಲವನ್ನು ತೆಗೆದುಕೊಳ್ಳುತ್ತಿದ್ದೀರ?

I am taking loan of 75 lakhs
ನಾನು ಎಪ್ಪತ್ತೈದು ಲಕ್ಷ ಮನೆ ಸಾಲ ಪಡೆಯುತ್ತಿದ್ದೇನೆ.

How long does it take to reach electronics city from silkboard
ಸಿಲ್ಕ್ ಬೋರ್ಡ್ನಿಂದ ಎಲೆಕ್ಟ್ರಾನಿಕ್ ಸಿಟಿ ತಲುಪಲು ಎಷ್ಟು ಹೊತ್ತಾಗುತ್ತೆ?

It usually takes 20 minutes if you take elevated highway
ಮೇಲ್ಸೇತುವೆಯ ಮೂಲಕ ಸಾಮಾನ್ಯವಾಗಿ ಇಪ್ಪತ್ತು ನಿಮಿಷವಾಗುತ್ತೆ.

How long will you be working today?
ನೀವು ಇವತ್ತು ಎಷ್ಟು ಹೊತ್ತು ಕೆಲಸ ಮಾಡುತ್ತೀರ?

I have lots of work. I will be working till 11PM
ನನಗೆ ತುಂಬ ಕೆಲಸವಿದೆ. ನಾನು ಹನ್ನೊಂದು ಗಂಟೆಯ ವರೆಗು ಕೆಲಸ ಮಾಡುವೆ.

Will you meet me for breakfast tomorrow?
ನಾಳೆ ತಿಂಡಿಗೆ ನೀವು ಸಿಗುತ್ತೀರ?

Yes, What time?
ಸಿಗುವೆ. ಎಷ್ಟು ಹೊತ್ತಿಗೆ?

8 in the morning
ಬೆಳಿಗ್ಗೆ ಎಂಟು ಗಂಟೆಗೆ.

What time does the metro service start?
ಮೆಟ್ರೊ ಸೇವೆ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತೆ?

Metro service starts at 6 AM and stops at 11PM.
ಮೆಟ್ರೊ ಸೇವೆ ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾಗಿ ಸಂಜೆ ಹನ್ನೊಂದು ಗಂಟೆಯ ವರೆಗೂ ಇರುತ್ತದೆ.