How far is mysore from Bengaluru? How long does it take to drive there?
ಬೆಂಗಳೂರಿಂದ ಮೈಸೂರು ಎಷ್ಟು ದೂರ? ಅಲ್ಲಿಗೆ ಗಾಡಿಯಲ್ಲಿ ಪ್ರಯಾಣ ಎಷ್ಟು ಹೊತ್ತಾಗುತ್ತೆ?

Mysore is 150KMs from Bangalore. It takes around 3 hours.
ಮೈಸೂರು ಬೆಂಗಳೂರಿಂದ ಸುಮಾರು ನೂರೈವತ್ತು ಕಿಲೋಮೀಟರ್ ದೂರ. ಇಲ್ಲಿಂದ ಮೂರು ಗಂಟೆ ಪ್ರಯಾಣ.

You were driving above the speed limit. You have to pay a fine of 500 rupees.
ನೀವು ವೇಗದ ಪರಿಮಿತಿ ಮೀರಿಸಿದ್ದೀರ. ಐನೂರು ರುಪಾಯಿ ದಂಡ ನೀಡಬೇಕು

OK. At what speed was I driving?
ಸರಿ, ನಾನು ಎಷ್ಟು ವೇಗದಲ್ಲಿ ಚಲಿಸುತ್ತಿದ್ದೆ?

You were driving at 90 kilometers per hour
ನೀವು ಗಂಟೆಗೆ ತೊಂಬತ್ತು ಕಿಲೋಮೀಟರ್ನಷ್ಟು ವೇಗದಲ್ಲಿ ಚಲಿಸುತ್ತಿದ್ದಿರಿ.

I want five days of leaves. I am going on a vacation.
ನನಗೆ ಐದು ದಿನ ರಜ ಬೇಕು. ನಾನು ಪ್ರವಾಸಕ್ಕೆ ಹೋಗುತ್ತಿದ್ದೇನೆ.

Five days is a lot. We can grant 3 days as of now.
ಐದು ದಿನ ಜಾಸ್ತಿ. ಸಧ್ಯಕ್ಕೆ ಮೂರು ದಿನ ಕೊಡಬಹುದು.

OK, Thank you.
ಸರಿ. ಧನ್ಯವಾದಗಳು.

How many kids do you have in your class room?
ನಿಮ್ಮ ತರಗತಿಯಲ್ಲಿ ಎಷ್ಟು ಜನ ಮಕ್ಕಳಿದ್ದಾರೆ?

we have about 20 students in a classroom
ನಮ್ಮ ತರಗತಿಯಲ್ಲಿ ಸುಮಾರು ೨೦ ಜನ ಮಕ್ಕಳಿದ್ದಾರೆ

Can you give me 5 meters of cloth for shirt?
ಅಂಗಿಗೆ ಆಗುವಷ್ಟು ಐದು ಮೀಟರ್ ಬಟ್ಟೆ ಕೊಡಿ.

Thats a lot, is it for two shirts?
ಹೆಚ್ಚಾಯಿತು. ಇದು ಎರಡು ಅಂಗಿಗೇ?

Yes, its for two shirts.
ಹೌದು. ಇದು ಎರಡು ಅಂಗಿಗಳಿಗೆ.

This pulav recipe needs 5 chillies and 25 gms of ginger
ಪಲಾವ್ ಮಾಡಲು ಐದು ಮೆಣಸಿನಕಾಯಿ ಹಾಗು ೨೫ ಗ್ರಾಮ್ ಶುಂಠಿ ಬೇಕು.

OK. Is two onions enough?
ಎರಡು ಈರುಳ್ಳಿ ಸಾಕೆ?

Thats Enough
ಸಾಕು

Who is the first Indian woman to win Olympic medal?
ಒಲಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯ ಹೆಸರೇನು?

Its Karnam Malleswari.
ಉತ್ತರ ಕರ್ಣಮ್ ಮಲ್ಲೇಶ್ವರಿ.

How many hockey golds did India win in Olympics until now?
ಒಲಂಪಿಕ್ ನಲ್ಲಿ ಇಲ್ಲಿಯವರೆಗು ಭಾರತ ಎಷ್ಟು ಚಿನ್ನ ಪಡೆದಿದೆ?

India has won 8 Olympic golds in hockey until now?
ಹಾಕಿಯಲ್ಲಿ ಭಾರತ ಇದುವರೆಗೂ ಎಂಟು ಒಲಂಪಿಕ್ ಚಿನ್ನದ ಪದಕಗಳನ್ನು ಪಡೆದಿದೆ.